FAQ ‘S’


ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಾಲಂ 38(ಸಿ) ತಿದ್ದುಪಡಿಯಂತೆ 38(ಡಿ) ಯನ್ನು ಸೇರ್ಪಡೆಗೊಳಿಸಿರುವ ಬಗ್ಗೆ

1. ಕಾಲಂ ೩೮(ಡಿ) ಇದರ ತಿದ್ದುಪಡಿ ಉದ್ದೇಶ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅವಾರ್ಡ್ ಅನುಮೋದನೆಗೊಂಡು ಭೂಸ್ವಾಧೀನಪಡಿಸಿಕೊಂಡು ಪ್ರದೇಶದಲ್ಲಿ ಭೂಮಾಲಿಕರು ಅಥವಾ ಅವರಿಂದ ನಿವೇಶನ ಖರೀದಿಸಿರುವ ರೆವಿನ್ಯೂ ನಿವೇಶನದಾರರು ೨೦೦೮ ಕ್ಕಿಂತ ಪೂರ್ವದಲ್ಲಿ ಕಟ್ಟಡಗಳನ್ನು ನಿರ್ಮಿಸಿಕೊಂಡು ವಾಸವಾಗಿರುವಂತಹ ಕಟ್ಟಡವಿರುವ ನಿವೇಶನಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 1976ರ ಕಾಲಂ ೩೮(ಸಿ) ತಿದ್ದುಪಡಿ ತಂದು 38(ಡಿ) ಸೇರ್ಪಡೆ ಮಾಡಲಾಗಿದೆ.
2. ಸರ್ಕಾರದ ಸುಗ್ರೀವಾಜ್ಞೆ ಸಂಖ್ಯೆ : ಸಂವ್ಯಶಾಇ; 52/ಶಾಸನ/2016 ದಿನಾಂಕ : 28.05.2020 ರಂತು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1976ರ ಕಾಲಂ 38(ಸಿ) ತಿದ್ದುಪಡಿ ತಂದು 38(ಡಿ) ತಿದ್ದುಪಡಿಗೊಳಿಸಿ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಅದರಂತೆ ಪ್ರಾಧಿಕಾರದಿಂದ ಭೀಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿನ ಅನಧಿಕೃತ ಕಟ್ಟಡಗಳಿರುವ ನಿವೇಶನಗಳನ್ನು ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
3. ಸುಗ್ರೀವಾಜ್ಞೆ ಯಂತೆ ತಿದ್ದುಪಡಿಗೆ ಒಳಪಡುವ ಪ್ರಕರಣಗಳು :-
ಅ) ಮರುಮಂಜೂರಾತಿದಾರರು, ಸುಗ್ರೀವಾಜ್ಞೆಯ ದಿನಾಂಕದ 12 ವರ್ಷಗಳಿಗೆ ಮುಂಚಿತವಾಗಿ ಕಟ್ಟಡ ನಿರ್ಮಾಣ ಮಾಡಿರತಕ್ಕದ್ದು.

ಆ) ಮರುಮಂಜೂರಾತಿದಾರರು, ಸರಕಾರವು ವಿಧಿಸಬಹುದಾದ ಮಾರ್ಗಸೂಚಿ ದರದ ಮೌಲ್ಯ / ದಂಡವನ್ನು ಈ ಕೆಳಕಂಡಂತೆ ಪಾವತಿಸಿಕೊಳ್ಳಬೇಕಾಗಿರುತ್ತದೆ.


   ಕ್ರಮ ಸಂಖ್ಯೆ
ಮೂಲೆ ನಿವೇಶನ ಹೊರತು ಪಡಿಸಿ ಕಟ್ಟಡದ ಅಳತೆ ಪಾವತಿಸಿಕೊಳ್ಳಬೇಕಾದ ದಂಡ / ಮೌಲ್ಯ
01   20 x 30 ಅಡಿ   ಅಳತೆಯವರೆಗೆ   ಮಾರ್ಗಸೂಚಿದರದ ಶೇ. 10% ರಷ್ಟು
02   20 x 30 ಅಡಿ ಅಳತೆಯವರೆಗೆ 30 x 40 ಅಡಿ   ಅಳತೆಯವರೆಗೆ   ಮಾರ್ಗಸೂಚಿದರದ ಶೇ. 25% ರಷ್ಟು
03   30 x 40 ಅಡಿ ಅಳತೆಯವರೆಗೆ 40 x 60 ಅಡಿ   ಅಳತೆಯವರೆಗೆ   ಮಾರ್ಗಸೂಚಿದರದ ಶೇ. 40% ರಷ್ಟು
04   40 x 60 ಅಡಿ ಅಳತೆಯವರೆಗೆ 50 x 80 ಅಡಿ   ಅಳತೆಯವರೆಗೆ   ಮಾರ್ಗಸೂಚಿದರದ ಶೇ. 50% ರಷ್ಟು ಹಾಗೂ ಶೇ. 5%   ರಷ್ಟು ನಿಗಧಿತ ದಂಡ


• ಮೂಲೆ ನಿವೇಶನಗಳಲ್ಲಿನ ಕಟ್ಟಡಗಳಾಗಿದ್ದಲ್ಲಿ ಮೇಲ್ಕಂಡ ಶುಲ್ಕ / ದರದ ಎರಡುಪಟ್ಟು ದಂಡ / ಮೌಲ್ಯ ಪಾವತಿಸಿಕೊಳ್ಳಬೇಕಾಗಿರುತ್ತದೆ.

ಇ) 50 x 80 ಅಡಿ ಅಳತೆ ಅಂದರೆ ಗರಿಷ್ಠ ೪೦೦೦ ಚದರ ಅಡಿಗಳಿಗೆ ಮೀರಿದಂತೆ ಸದರಿ ಕಟ್ಟಡಗಲ್ಲಿರುವ ನಿವೇಶನಗಳನ್ನು ಮರುಮಂಜೂರಾತಿಗೆ ಅಳವಡಿಸಲು ಅವಕಾಶವಿರುತ್ತದೆ.

ಈ) ಅರ್ಹ ವ್ಯಕ್ತಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ / ನೋಟೀಸ್ ನೀಡಿದ 2 ತಿಂಗಳ ಅವಧಿಯೊಳಗೆ ಮರು ಮಂಜೂರಾತಿಗಾಗಿ ನಿಗಧಿತ ನಮೂನೆಯಲ್ಲಿ Online ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

ಉ) ಪ್ರಾಧಿಕಾರದ ಅಂತಿಮ ಅಧಿಸೂಚನೆಗೆ ಒಳಪಟ್ಟು, ಐತೀರ್ಪು ಅನುಮೋದನೆಗೊಂಡ, ಜಮೀನಿನಲ್ಲಿನ ಅನಧಿಕೃತ ಕಟ್ಟಡಗಳಿರುವ ನಿವೇಶನಗಳನ್ನು ಮಾತ್ರ ಮರುಮಂಜೂರಾತಿಗೆ ಪರಿಗಣಿಸಬಹುದು
4. ಸುಗ್ರೀವಾಜ್ಞೆ ಯಂತೆ ತಿದ್ದುಪಡಿಗೆ ಒಳಪಡದ ಪ್ರಕರಣಗಳು :-
ಅ) ಪ್ರಾಧಿಕಾರದ ಬಡಾವಣೆಗಳಲ್ಲಿನ ಉದ್ಯಾನವನ, ಆಟದ ಮೈದಾನ, ಮೂಲಭೂತ ಸೌಕರ್ಯಗಳ ನಿವೇಶನಗಳನ್ನು ಮರುಮಂಜೂರಾತಿಗೆ ವಲಪಡಿಸುವಂತಿಲ್ಲ.

ಆ) ಸ್ವಾಧೀನ ಪಡೆಯಲಾದ ಜಮೀನಿನಲ್ಲಿನ ರಸ್ತೆ, ಹೊರ ವರ್ತುಲ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ರಸ್ತೆ, ರೈಲ್ವೆ ಯೋಜನೆಗಳು - ಇವುಗಳ ಜಮೀನನ್ನು ಸಹ ಮರುಮಂಜೂರಾತಿಗೆ ಒಳಪಡಿಸುವಂತಿಲ್ಲ.

ಇ) ಬಡಾವಣೆಗಳಲ್ಲಿನ ಮಳೆ ನೀರಿನ ಚರಂಡಿ, ಕೆರೆ ಅಂಗಳ, ನದಿ ಪಾತ್ರ ಮತ್ತು ಅತೀ ವಿದ್ಯುಚ್ಚಕ್ತಿ ಪ್ರವಾಹಕ ತಂತಿ ಹಾದುಹೋಗಿರುವ ಕೆಳಬಾಗದ ಜಮೀನಿನಲ್ಲಿನ ಕಟ್ಟಡಗಳನ್ನು ಸಹ ಮರುಮಂಜೂರಾತಿಗೆ ಒಳಪಡಿಸುವಂತಿಲ್ಲ.

ಈ) ನ್ಯಾಯಾಲಯದಿಂದ ಮಧ್ಯಂತರ ಆದೇಶವಿರುವ ಪ್ರಕರಣಗಳನ್ನು ಮರುಮಂಜೂರಾತಿಗೆ ಒಳಪಡಿಸುಲು ಅವಕಾಶವಿರುವುದಿಲ್ಲ.

ಉ) ಖಾಲಿ ನಿವೇಶನಗಳನ್ನು ಮರುಮಂಜೂರಾತಿಗೊಳಿಸಲು ಅವಕಾಶವಿರುವುದಿಲ್ಲ.

ಊ) ಖಾಲಿ ನಿವೇಶನಗಳನ್ನು ಗುರುತಿಸಿ ಪ್ರಾಧಿಕಾರದ ವತಿಯಿಂದ ಹರಾಜು ಮುಖೇನ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಋ) ಸುಗ್ರೀವಾಜ್ಞೆ ಹೊರಪಡಿಸಿದ ದಿನಾಂಕದಿಂದ ೧೨ ವರ್ಷಗಳ ಹಿಂದೆ ಅಂದರೆ ಮೇ ೨೦೦೮ ರ ನಂತರ ನಿರ್ಮಿಸಲಾದ ಅನಧಿಕೃತ ಕಟ್ಟಡಗಳ ನಿವೇಶನಗಳನ್ನು ಸಕ್ರಮಗೊಳಿಸಲು ಅವಕಾಶವಿರುವುದಿಲ್ಲ. ಆದ್ದರಿಂದ         ಇಂತಹವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
5. ಕಲಂ ೩೮(ಡಿ) ಇದರಡಿಯಲ್ಲಿ ಮರು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಬಗೆ
ಆನ್ ಲೈನ್ ಮುಖಾಂತರ ಮಾತ್ರ.
6. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿ / ಮಾಹಿತಿಗಳ ಬಗ್ಗೆ
www.bdabangalore.org ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ. ಅಗತ್ಯವಿದ್ದಲ್ಲಿ, ಸಹಾಯಕ ಆಯುಕ್ತರು, ಮರುಹಂಚಿಕೆ / ಮರು ಮಂಜೂರಾತಿ ವಿಭಾಗ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರನ್ನು ನೇರವಾಗಿ ಸಂದರ್ಶನ ವೇಳೆಯಲ್ಲಿ ಖುದ್ದು ಭೇಟಿ ಮಾಡಬಹುದಾಗಿರುತ್ತದೆ. ಅಥವಾ ಪ್ರಾಧಿಕಾರದ ದೂರವಾಣಿ ಸಂಖ್ಯೆ : 23442273 / 23442274 / 23368615 ಇವುಗಳಲ್ಲಿನ ಆಂತರಿಕ ದೂರವಾಣಿ ಸಂಖ್ಯೆ : 248, 288 ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ.
7. ಅರ್ಹ ವ್ಯಕ್ತಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ 2 ತಿಂಗಳ ಅವಧಿಯೊಳಗೆ ಮರು ಮಂಜೂರಾತಿಗಾಗಿ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ
ತಪ್ಪಿದಲ್ಲಿ / ವಿಳಂಭವಾದಲ್ಲಿ ತಮ್ಮ ಬಳಿ ಯಾವುದೇ ದಾಖಲಾತಿಗಳು ಇಲ್ಲವೆಂದು ಭಾವಿಸಿ, ಪ್ರಾಧಿಕಾರವು The Karnataka Public Premises (Eviction of Unauthorised Occupants) Act. 1974 ರಡಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡ ಸೇರಿದಂತೆ, ನಿವೇಶನವನ್ನು ಪ್ರಾಧಿಕಾರದ ಭ್ಹೌತಿಕ ಸ್ವಾಧೀನಕ್ಕೆ ಪಡೆಯಲು ನಿಯಮಾವಳಿಗಳನ್ವಯ ಕ್ರಮ ಜರುಗಿಸಲಾಗುವುದು.
ಸೂಚನೆ :-
1. ಯಾವುದೇ ಕಟ್ಟಡವು ಕಟ್ಟಡ ನಿಬಂಧನೆಗಳು ಮತ್ತು ವಲಯ ನಿಯಮಾವಳಿಗೆ ವಿರುದ್ಧವಾಗಿ ನಿರ್ಮಿಸಿದ್ದಲ್ಲಿ ಸದರಿ ಕಟ್ಟಡಗಳನ್ನು ಈ ಕಾಯ್ದೆಯಡಿ ಸಕ್ರಮಗೊಳಿಸಲು ಬರುವುದಿಲ್ಲ. ಅಂತಹ ಪ್ರಕರಣಗಳ ಬಗ್ಗೆ ಮಂಜೂರಾತಿ ಸಕ್ಷಮ     ಪ್ರಾಧಿಕಾರದಿಂದ (ಬಿಬಿಎಂಪಿ) ಪ್ರತ್ಯೇಕವಾಗಿ ವ್ಯವಹರಿಸಲ್ವಡುತ್ತದೆ.

2.  ತಿಳುವಳಿಕೆ ಪಾತ್ರ ನೀಡಿದಾಕ್ಷಣ ತಮ್ಮ ಅನಧಿಕೃತ ಸ್ವಾಧೀನವನ್ನು ಪ್ರಾಧಿಕಾರವು ಒಪ್ಪಿಕೊಂಡಿದೆಯೆಂದು ಭಾವಿಸತಕ್ಕದ್ದಲ್ಲ. ಕಾರಣ, ತಮ್ಮ ಮಾನವೀಯ ವಿಚಾರಣೆ ಮತ್ತು ಪ್ರಾಧಿಕಾರದ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ.